Thursday 24 April 2014

Beautiful song ! Complete surrender onto Lord Krishna's feet! Here goes the Bhajan....

Jai Shri Krishna !!
Sing this song in the tune "Thoogire Rangana Thoogire Krishnana..."
                                                              ಶ್ರೀ ಗುರುಭ್ಯೋ ನಮಃ  
                                                                                                    ರಾಗ : ತೂಗಿರೆ ರಂಗನ

1 ಹೇ ಕೃಷ್ಣ I ನಿನ್ನಯ I ಪಾ..ದದ ಧೂಳಿನ
   ಕಣವಾ I ಮಾಡೋ I ಎನ್ನನು (2)
2 ನಿನ್ನಯ I ಮುಡಿಯಲ್ಲಿ...ನವಿಲುಗರಿ I
   ಮಾಡೋ I ನೀ I ಎನ್ನನು I ಹೇ...ಶ್ರೀಹರಿ 
   ಮಾಡಿಕೋ I ನಿನ್ನಾ...ಕರದೀ..ಮುರಳಿ I
   ನುಡಿಸು...ಆನಂದದ I ಗಾನ...ಲಹರಿ II
3 ಮಾಡೋ..ನೀ I ಎನ್ನನು I ಹಣೆಯಾ...ತಿಲಕ
   ಮಾಡಿಕೋ I ನಿನ್ನಾ I ಕೊರಳಿನ I ಪದಕ
   ಮಾಡೆನ್ನ I ತೋ...ಳ್ಬಳೆ I ಕಂಕಣವಾ I
   ಮಾಡು...ನಿನ I ಪಾ...ದದ I ನೂಪುರವಾ II
4 ಮಾಡೆನ್ನ I ನಿ...ನ್ನಯ ಪೀತಾಂಬರಾ I
   ಮಾಡೆನ್ನ I ನಿ...ನ್ನಯ I ಕೊರಳಿನ ಹಾರಾ I
   ಮಾಡೆನ್ನ I ನಿನ ಕರದೀ I ನವ...ನೀತವಾ I
   ಮಾಡೆನ್ನ I ಬೆರಳಿನ I ಉಂಗುರವಾ II
5 ನಿನ I ಮನೆಯ I ಮಡಕೆಯ I ಮಾಡೆನ್ನನು I
  ನಿನ್ನಾ...ಕಡೆಗೋಲಾಗಿ I ಮಾಡೆನ್ನನು
  ನಿನ್ನಾ...ಗೆಳೆಯಾ... ಗೋಪ... ಮಾಡೆನ್ನನು I
  ನಿನ I ಗೆಳತೀ I ಗೋಪಿಯ I ಮಾಡೆನ್ನನು II
6 ಗೋಕುಲದಾ I ತರು...ಲತೆ I ಮಾಡೆನ್ನನು I
  ಯಮುನಾ...ತೀರದ I ಮರಳು I ಮಾಡೆನ್ನನು I 
  ಗೋವಾಗಿಯೋ I ಕರುವಾಗಿಯೋ I ಮಾಡೆನ್ನನು I
  ಬೃಂದಾವನದಾ I ನವಿಲ I ಮಾಡೆನ್ನನು II
7 ನಿನ I ಮೈಗೆ I ಚಂದನ I ನಾನಾಗುವೆ I
  ನಿನ I ಒಡಲಾ I ಮೇಲೆಲ್ಲ I ಘಮಘಮಿಸುವೆ I
  ಗುಂಗುರು I ಮುಡಿಯಲಿ I ಹೂವು I ನಾನಾಗುವೆ I
  ವನ I ಮಾಲೆಯು I ನಾನಾಗಿ I ನಸು...ನಗುವೆ II
8 ನಿನ ಕಣ್ಣ I ಕಾಡಿಗೆ I ನಾನಾಗುವೆ I
  ಬಟ್ಟಲು I ಕಂಗಳ I ಕಾಂತಿ I ನಾನಾಗುವೆ I
  ಹಣೆಮೇಲಿನ I ಮುಂಗುರುಳು I ನಾನಾಗುವೆ I
  ನಿನ I ಸುಂದರ I ಮೊಗದಾ I ಕಿರುನಗೆಯಾಗುವೆ II
9 ಪಾದ...ಪೂಜೆಗೆ I ಪುಷ್ಪ I ನಾನಾಗುವೆ I
  ನಿನ I ಪಾದವನ್ನು I ಸಿಂ...ಗಾರ I ಮಾಡುವೆ I
  ದಿವ್ಯ... ಗಂಧದ I ಧೂಪ I ನಾನಾಗುವೆ I 
  ದಿವ್ಯ... ಸುಗಂಧ I ಎಲ್ಲೆಲ್ಲೂ I ಹರಡುವೆ II
10 ಬೆಳಗುವ I ದೀಪವು I ನಾನಾಗುವೆ I
    ನಿನ್ನಾ I ಗುಡಿಯನ್ನು I ಹಗ...ಲಿರುಳು I ಬೆಳಗುವೆ I
    ಗೋಪುರದಾ I ಘಂಟೆಯು I ನಾನಾಗುವೆ I
    ಘಂಟಾ...ನಾದದ I ಸೇವೆಯಾ...ಮಾಡುವೆ I
11 ನಿನ I ಗುಡಿಯಾ I ಹೊಸಿಲು... ನಾನಾಗುವೆನೋ I
    ಭಕ್ತರ I ಪಾದದ I ಧೂಳಿ I ಧರಿಸುವೆನೋ I
   ನಿನ I ಗುಡಿಯಾ I ಕಂಭವು I ಆಗುವೆನೋ I
   ದಿನವೂ I ನಿನ I ದಿವ್ಯ...ದರುಶನ I ಪಡೆವೆನೋ II
12 ನಿನ್ನಾ...ನೈವೇದ್ಯವು I ನಾನಾಗುವೆ I
    ಎನ್ನಾತ್ಮವ I ನಿನಗೆ I ಅ...ರ್ಪಣೆಯ I ಮಾಡುವೆ I
    ಆರತಿಯಾ I ಕರ್ಪೂರ I ನಾನಾಗುವೆ I
   ನಿನಗೇ I ಅರ್ಪಿತವಾಗಿ I ಉರಿದುಹೋಗುವೆ II
13 ನಿನ ಬಿಟ್ಟು I ಅರೆಕ್ಷಣ I ನಾ I ಬದುಕೆನೋ I
    ನಿನ್ನಲ್ಲೇ I ಒಂದಾಗ I ಬಯಸುವೆನೋ I
   ಎನ್ನಾತ್ಮ I ಸಾಮ್ರಾಜ್ಯಕೆ I ನೀ I ಅರಸನೋ I
   ಜನುಮ...ಜನುಮಕೂ I ನಾನು...ನಿನ I ದಾಸನೋ II

  ಹೇ ಕೃಷ್ಣ I ನಿನ್ನಯ I ಪಾ..ದದ ಧೂಳಿನ 
   ಕಣವಾ I ಮಾಡೋ I ಎನ್ನನು (2)
Copyrights @ YSKST

Share and sing the Happiness:)

Source : Yogeshwara Sri Krishna Seva Trust